ಸೀರೆಯುಟ್ಟ ನೀರೆ, ಎಲ್ಲರ ಮನಸೂರೆ….
“ಇದೇನ್ರೇ ಬಂದಿದೆ ರೋಗ ನಿಮಗೆ? ಯುಗಾದಿ ಹಬ್ಬದ ದಿನವಾದ್ರೂ ಲಕ್ಷಣವಾಗಿ ಸೀರೆ ಉಟ್ಕೊಳ್ಳೋದು ಬಿಟ್ಟು, ಸುಡುಗಾಡು ಜೀನ್ಸ್ ಪ್ಯಾಂಟು-ಟಿ-ಶರ್ಟು ಹಾಕ್ಕೊಂಡು ಓಡಾಡ್ತಿದ್ದೀರಲ್ಲಾ…?”- ಎಂಭತ್ತರ ಹರೆಯದ ಕಮಲಜ್ಜಿ ತನ್ನ ಮೊಮ್ಮಕ್ಕಳಿಗೆ ಗದರಿಕೊಂಡ ಪರಿಯಿದು. ಇದು ಕಮಲಜ್ಜಿಯ ಗೊಣಗಾಟವಷ್ಟೇ ಅಲ್ಲ, ಸೀರೆಗಿರುವ ಮಹತ್ವ ಹಾಗೂ ಔನ್ನತ್ಯವನ್ನು ಬಲ್ಲ ಯಾರೇ ಆದರೂ ಉದುರಿಸುವ ಆಣಿಮುತ್ತು. ಹೌದು, ‘ಸೀರೆ’ (Saree) ಎಂಬುದು ಕೇವಲ ವಸ್ತುವಷ್ಟೇ ಅಲ್ಲ, ಅದು ಹಬ್ಬ-ಹರಿದಿನದಂಥ ಶುಭಸಂದರ್ಭಗಳಲ್ಲಿ ಕಡ್ಡಾಯವಾಗಿ ಉಡಬೇಕಾದ ‘ಸಮವಸ್ತ್ರ’. ಅಷ್ಟೇ ಏಕೆ, ಅದು ಸಭ್ಯತೆಯ ಪ್ರತೀಕ, ನಮ್ಮ […]