ಹೀಗೊಬ್ಬಳು ಇದ್ದಳು ರಾಣಿ!
ಪುರಾತನ ಇಸ್ರೇಲ್ ನಲ್ಲಿ ವಾಸಿಸುತ್ತಿದ್ದ ಬತ್ ಶೀಬಾಳಿಗೆ ತನ್ನ ಸೌಂದರ್ಯದ ಅರಿವು ಚೆನ್ನಾಗಿಯೇ ಇತ್ತು. ಆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಕೆ ಕಾಳಜಿ ವಹಿಸುತ್ತಿದ್ದಳಂತೆ. ಆಗಿನ ಕಾಲದಲ್ಲಿ ಕುಲೀನ ಯೆಹೂದಿ ಸ್ತ್ರೀಯರು ತಮ್ಮ ಸಮಾಜದ ವೀರಾಗ್ರಣಿ ಪುರುಷರ ಭೋಗದ ವಸ್ತುವಿನಂತೆ ಬದುಕುತ್ತಿದ್ದರು. ಆದರೆ ಸಮಾಜದ ನೈತಿಕ ಕಟ್ಟುಪಾಡುಗಳು ಬಹಳ ಕಟ್ಟುನಿಟ್ಟಾಗಿ ಅನುಸರಿಸಲ್ಪಡುತ್ತಿದ್ದರಿಂದ ಮಹಿಳೆಯರು ಸಾಕಷ್ಟು ಸುರಕ್ಷತೆಯಲ್ಲೇ ಬದುಕುತ್ತಿದ್ದರು. ಬತ್ ಶೀಬಾಳ ತಂದೆ ಈಲಿಯಂ ತನ್ನ ಮಗಳನ್ನು ಬಹಳ ಪ್ರೀತಿಯಿಂದ ಸಾಕಿದ್ದನು. ಆದ್ದರಿಂದಲೇ ಆತ ತನ್ನ ಸೌಂದರ್ಯದ ಖನಿಯಂತಿದ್ದ ಮಗಳನ್ನು ಶ್ರೀಮಂತನಲ್ಲದಿದ್ದರು ವೀರನೆಂದು ಗುರುತಿಸಲ್ಪಟ್ಟಿದ್ದ […]