ಅಧ್ಯಾತ್ಮ ಎಂದರೇನು? ಆಧ್ಯಾತ್ಮಿಕ ಸಾಧನೆಗೆ ಜೀವನ ಕ್ರಮ ಹೇಗಿರಬೇಕು?
ಅಧ್ಯಾತ್ಮ ಸಾಧನೆ ಒಂದು ಪರಕೀಯ ಸಾಧನೆ ಅಲ್ಲ. ಅದು ಜೀವನದ ಪರಮೋಚ್ಚ ಸಾಧನೆ. ಹಿಂದೂ ಧರ್ಮದಲ್ಲಿ ಸ್ವರ್ಗಾರೋಹಣ, ಸ್ವರ್ಗವಾಸ ಅಥವ ಸ್ವರ್ಗಸ್ಥರಾಗೋದಕ್ಕಿಂತ ಮುಖ್ಯವಾಗಿ ಅಥವ ಕೆಲವರು ಹೇಳುವ ರೀತಿಯಲ್ಲಿ ಕೈಲಾಸವಾಸಿಗಳು ಅಥವ ವೈಕುಂಠವಾಸಿಗಳು ಆಗೋದಕ್ಕಿಂತ ಮುಖ್ಯವಾಗಿ ಮೋಕ್ಷಸಾಧನೆ ಅದು ಪರಮೋನ್ನತಿ. ಆ ಕಾರಣದಿಂದಾಗಿ ಅಧ್ಯಾತ್ಮ ಮತ್ತು ಆಧ್ಯಾತ್ಮಿಕ ಸಾಧನೆ ಜೀವನದ ಉದ್ದೇಶವಾಗಬೇಕು, ಅದು ಜೀವನದ ಭಾಗವಾಗಬೇಕು. ಭಗವದ್ಗೀತೆಯಲ್ಲೇ ಆಗಿರಬಹುದು, ಉಪನಿಷತ್ತಿನಲ್ಲೇ ಆಗಿರಬಹುದು, ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟ ರೀತಿಯಲ್ಲಿ ಅಧ್ಯಾತ್ಮ ಅದು ಜೀವನದ ಭಾಗವಾಗಬೇಕು. ಯಾಕೆ ಅಂತ ಹೇಳಿದ್ರೆ ಜೀವನದಲ್ಲಿ […]