gahana logo

Gahana Magazine

₹199/ Year

ಮಹಿಳೆಗೆ ಮೈತುಂಬ ಸಂಕೋಲೆ!

ಅಂತ್ಯವಿಲ್ಲದ ಪುರುಷಮೃಗದ ಪಾರುಪತ್ಯ

ಶತಮಾನಗಳು ಉರುಳಿದರೂ, ಶಿಕ್ಷಣ ಅರಳಿದರೂ, ಉದ್ಯೋಗಾವಕಾಶ ಧರೆಗಿಳಿದರೂ ಮಹಿಳೆ ಎರಡನೇ ದರ್ಜೆಯ ಪ್ರಜೆ ಎನ್ನುವ ವಿಷಯದಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಸುಶಿಕ್ಷಿತ, ಉನ್ನತ ಹುದ್ದೆಯಲ್ಲಿರುವ, ಅಧಿಕಾರದಲ್ಲಿರುವ ಸ್ತಿçÃಯಿಂದ ಗೃಹಿಣಿಯಾಗಿ ಮನೆ ನಿಭಾಯಿಸುವ, ಹೊಲಗದ್ದೆಗಳಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯವರೆಗೆ ಇಡೀ ಸ್ತಿçà ಕುಲಕ್ಕೆ ಪುರುಷ ಅಹಂನ ತಾಳಕ್ಕೆ ತಕ್ಕಂತೆ ಕುಣಿಯಲೇಬೇಕಾದ ಅನಿವಾರ್ಯತೆ. ಸಾಲದ್ದಕ್ಕೆ ಸಂಪ್ರದಾಯಗಳ ಸಂಕೋಲೆ ಬೇರೆ. ಪುರುಷ ಶ್ರೇಷ್ಠನೆಂಬ ವ್ಯಸನದ ಮನಃಸ್ಥಿತಿಯಿಂದ ಮಹಿಳೆಗೆ ಮುಕ್ತಿ ಎಂದೋ?!

****

ಸಂಜೆ ನಮ್ಮೂರಿನ ರೈತರೊಬ್ಬರ ಜೊತೆ ಮಾತಾಡುತ್ತಿದ್ದೆ. ಮಾತು ಮಹಿಳೆಯರ ಬಗ್ಗೆ ಹೊರಳಿತು. ಆಗ ಅವರು ಹೇಳಿದ ಮಾತು ನನ್ನನ್ನು ಮತ್ತೆ ಮತ್ತೆ ಯೋಚಿಸುವಂತೆ ಮಾಡಿತು. ಅವರು ಹೇಳಿದ್ದು ಹೀಗೆ, “ನಮಗೆ ಗಂಡಸರಿಗೆ ಒಂದೇ ಕೆಲಸ, ಹೊರಗೆ, ಕೂಲಿಗೋ, ಅಥವಾ ಸ್ವಂತ ಇದ್ದರೆ, ತೋಟ – ಗದ್ದೆಗಳಲ್ಲಿ ಕೆಲಸಕ್ಕೋ ಹೋಗಿ ಸಂಜೆ ಮನೆಗೆ ಬಂದು ಹೊಟ್ಟೆತುಂಬ ಉಂಡು ಮಲಗುತ್ತೇವೆ. ಆದರೆ ಹೆಂಗಸರು ಹಗಲೆಲ್ಲ ಕೆಲಸಮಾಡಬೇಕು, ನಂತರ ಮನೆಗೆ ಬಂದು ಅಡಿಗೆ, ಮನೆಕೆಲಸಗಳು, ಮಕ್ಕಳನ್ನು ನೋಡಿಕೊಳ್ಳುವುದು ಇತ್ಯಾದಿಗಳನ್ನೂ ಮಾಡಬೇಕು. ಅಪರೂಪಕ್ಕೊಬ್ಬ ಗಂಡAದಿರು ತಮ್ಮ ಹೆಂಡತಿಯರಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತಾರೆ. ಆದರೆ ಹೆಚ್ಚಿನವರು ಸಂಜೆಯ ಕುಡಿತದ ದಾಸರು. ರಾತ್ರಿಯಾಗುತ್ತ ಹೋದಂತೆ, ಈ ಕುಡಿತದ ಚಾಳಿಯ ಗಂಡ ಎಷ್ಟು ಹೊತ್ತಿಗೆ ಮನೆಗೆ ಬಂದಾನು, ಅಥವಾ ಕುಡಿದು ಎಲ್ಲಾದರೂ ಬಿದ್ದಿದ್ದಾನೆಯೇ, ಎಂದು ಕುತ್ತಿಗೆ ಉದ್ದ ಮಾಡಿ ನೋಡುತ್ತ ಕೊನೆ ಇನ್ನೂ ತಡವಾದರೆ ಹುಡುಕುತ್ತ ಹೋಗುವ ಪ್ರಾರಬ್ದವೂ ಆಕೆಗೆ ಸೇರಿಕೊಳ್ಳುತ್ತದೆ”.
ಇದು ನಮ್ಮ ಗ್ರಾಮೀಣ ಭಾರತದ ಕೃಷಿವಲಯದ ಸರ್ವೇ ಸಾಮಾನ್ಯ ಸಂಗತಿ. ಈ ಪರಿಸ್ಥಿತಿ ಕೂಲಿ ಕಾರ್ಮಿಕರು, ಅತಿಸಣ್ಣರೈತರು ಮತ್ತು ಕೆಳವರ್ಗಗಳಲ್ಲಿ ದಟ್ಟವಾಗಿದ್ದರೆ. ಮಧ್ಯಮ ಮತ್ತು ಮೇಲ್ವರ್ಗಗಳಲ್ಲಿ ಸ್ವಲ್ಪ ಭಿನ್ನವಾಗಿದೆ. ಯಾಕೆಂದರೆ ಆರ್ಥಿಕವಾಗಿ ಅನುಕೂಲ ಸ್ಥಿತಿಗೆ ತಲಪಿದವರಲ್ಲಿ ಗ್ರಾಮೀಣ ಮಹಿಳೆಯರು ಹೊರಗಿನ ದುಡಿಮೆಗೆ ಹೋಗುವುದು ಕಡಿಮೆ. ಆದರೆ ಅಲ್ಲಿ ಕೂಡಾ ಮಹಿಳೆಯರಿಗೆ ಬೇರೆಯೇ ಆದ ಸಮಸ್ಯೆಗಳಿವೆ. ಅವು ಹೆಚ್ಚಾಗಿ ಪುರುಷ ಪ್ರಧಾನ ವ್ಯವಸ್ಥೆಗೆ ಸಂಬAಧಪಟ್ಟವುಗಳಾಗಿವೆ.
ಇನ್ನು ನಗರಗಳಲ್ಲಿಯೂ ಕೂಡಾ ಇಂತಹ ಸಮಸ್ಯೆ ಇಲ್ಲವೆಂದಲ್ಲ. ಇದೆ ಅಲ್ಲಿ ದುಡಿಯುವ ಕೆಳವರ್ಗದ ಮಹಿಳೆಯ ಪರಿಸ್ಥಿತಿ ಹೆಚ್ಚೂ ಕಡಿಮೆ ಇದೇ ಆಗಿದ್ದರೆ, ನಗರಗಳಲ್ಲಿ ದುಡಿಯುವ ಮದ್ಯಮವರ್ಗದ ಮಹಿಳೆಯರು ಗ್ರಾಮೀಣ ಮದ್ಯಮ ವರ್ಗದ ಮಹಿಳೆಯರಿಗಿಂತಲೂ ಹೆಚ್ಚು ಸಮಸ್ಯೆಗಳನ್ನು ಹೊಂದಿದ್ದಾರೆ.
ಇದೆಲ್ಲದರ ಜೊತೆಯಲ್ಲಿ ಮಹಿಳೆಯರಿಗೆ ಹೆಗಲೇರಿರುವ ಮತ್ತೊಂದು ದೊಡ್ಡ ಸವಾಲು ಮತ್ತು ಜವಾಬ್ದಾರಿಯೆಂದರೆ ತಾನೂ ಸೇರಿದಂತೆ ಹೆಣ್ಣು ಮಕ್ಕಳನ್ನು ದುಷ್ಟರಿಂದ, ಅತ್ಯಾಚಾರಿಗಳಿಂದ ಕಾಪಾಡಿಕೊಳ್ಳುವುದು.

ಅತ್ಯಾಚಾರದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾದಂತೆ ಕಂಡು ಬರುತ್ತಿದೆ. ಆದರೆ ಇದು ನಿಜವಲ್ಲ. ಇತ್ತೀಚೆಗೆ ಅದು ನಾನಾ ಕಾರಣಗಳಿಂದ ಬೆಳಕಿಗೆ ಬರುತ್ತಿದೆ ಮತ್ತು ಸುದ್ದಿಯಾಗುತ್ತಿದೆ ಅಷ್ಟೇ. ಹಿಂದೆಯೂ ಇದು ದೊಡ್ಡ ಪ್ರಮಾಣದಲ್ಲೇ ಇತ್ತು. ಆದರೆ ಹೊರಪ್ರಪಂಚಕ್ಕೆ ಪ್ರಕಟವಾಗುವುದು ಮಾತ್ರ ಕಡಿಮೆ ಇತ್ತು ಅಷ್ಟೆ.
ಇದೊಂದು ಬಹುಮುಖ ಸಮಸ್ಯೆ, ಬಹಳ ಆಳ ವಿಸ್ತಾರಗಳನ್ನು ಹೊಂದಿರುವ ಈ ವಿದ್ಯಮಾನಗಳಲ್ಲಿ ಬಗ್ಗೆ ಬರೆಯುವಾಗ ನಾನು ಈ ಲೇಖನದಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳನ್ನು ಹೆಚ್ಚಾಗಿ ಗಮನದಲ್ಲಿಟ್ಟುಕೊಂಡಿದ್ದೇನೆ. ಇದರಲ್ಲಿನ ಹಲವಾರು ವಿಷಯಗಳು ನಗರ ಪ್ರದೇಶಗಳಿಗೂ ಅನ್ವಯವಾಗುತ್ತವೆ.
ಮಹಿಳೆಯರ ಈ ಎಲ್ಲ ಸಮಸ್ಯೆಗಳ ಹಿಂದಿರುವುದು ಮುಖ್ಯವಾಗಿ ನಮ್ಮ ಸಾಮಾಜಿಕ ನೆಲೆಗಟ್ಟು. ಇದು ಇಂದಿಗೂ ಊಳಿಗ ಮಾನ್ಯ, ಪುರುಷಪ್ರಧಾನ ನೆಲೆಯಿಂದ ಈಚೆ ಬಂದೇ ಇಲ್ಲ. ನಮ್ಮಲ್ಲಿ ಎಷ್ಟೇ ಜಾಗತೀಕರಣ, ಆಧುನಿಕ ವಿದ್ಯಾಭ್ಯಾಸ ಎಲ್ಲ ಬಂದಿದ್ದರೂ ನಮ್ಮ ಸಾಮಾಜಿಕ ಸ್ಥಿತಿ ಮಾತ್ರ ಹಾಗೆಯೇ ಉಳಿದಿದೆ.
ಗಂಡು ಇಂದಿಗೂ ಯಜಮಾನ. ಎಲ್ಲ ಆಸ್ತಿಗಳ ಒಡೆಯ. ನೀತಿ ನಿರ್ಧಾರಗಳು, ಆಡಳಿತ, ಹಣಕಾಸಿನ ನಿರ್ವಹಣೆ ಆತನ ಹಕ್ಕೆಂದು ಭಾವಿಸಲಾಗಿದೆ. ಆದರೆ ಇದನ್ನು ಜವಾಬ್ದಾರಿಯೆಂದು ಕರೆಯಲಾಗುತ್ತದೆ. ಜಮೀನು ದಾಖಲೆಗಳಲ್ಲೂ ಗಂಡಿಗೇ ಆದ್ಯತೆ. ಇತ್ತೀಚಿನ ಕಾನೂನು ತಿದ್ದಪಡಿಗಳು ಹೆಣ್ಣಿಗೆ ಸ್ವಲ್ಪ ಮಟ್ಟಿನ ಹಕ್ಕುಗಳನ್ನು ಕೊಟ್ಟಿವೆ. ಆದರೆ ಅದು ಹಲವು ಸಲ ಕುಟುಂಬದವರ ಕೃಪೆಯಂತೆ ಆಕೆಗೆ ದೊರಕುತ್ತದೆ. ಮತ್ತು ಅದರ ನಿರ್ವಹಣೆಯೂ ಗಂಡಿನದೇ ಆಗಿರುತ್ತದೆ. ಇವೆಲ್ಲದರಿಂದಾಗಿ ಇಡೀ ಕುಟುಂಬವನ್ನು ಪಾಲನೆ ಮಾಡುವ ಹೊಣೆ ಹೊತ್ತಿರುವ ಹೆಣ್ಣು ಕೂಡಾ ಗಂಡಿನ ಆಸ್ತಿಯ ಭಾಗವಾಗಿ ಪರಿಗಣಿತಳಾಗಿ ಉಳಿದಿದ್ದಾಳೆ.

ಊಳಿಗಮಾನ್ಯ ವ್ಯವಸ್ಥೆಯ ಇನ್ನೊಂದು ಮುಖ್ಯ ಲಕ್ಷಣವೆಂದರೆ. ಈ ಆಸ್ತಿಯೆನ್ನುವುದು ಭಾವನಾತ್ಮಕ ಹೇಗೋ ಹಾಗೆ ಗೌರವದ ಮತ್ತು ಪ್ರತಿಷ್ಠೆಯ ಸಂಕೇತವೂ ಆಗಿರುವುದು. ಆದ್ದರಿಂದಲೇ ತನ್ನ ಜೊತೆಗಾರಳಾಗಿ ಕುಟಂಬದ ಸಮಾನ ಸದಸ್ಯೆಯಾಗಿ ಇರಬೇಕಾದ ತಾಯಿ, ಹೆಂಡತಿ. ಮಗಳು ಇವರುಗಳು ಅಷ್ಟೇ ಆಗಿರದೆ, ಪವಿತ್ರಳು, ಪರಿಶುದ್ಧಳು ಆಗಿ ಇರಬೇಕು ಮತ್ತು ಅದರ ಸಕಲ ಜವಾಬ್ದಾರಿಗಳೂ ಆಕೆಯದೇ ಆಗಿರಬೇಕೆಂದು ಬಯಸುವುದು.
ಇದೇ ಕಾರಣಕ್ಕಾಗಿ ಒಬ್ಬ ವ್ಯಕ್ತಿ ಅಥವಾ ಸಮೂಹ ತನ್ನ ವಿರೋಧಿಯಾದ ಇನ್ನೊಬ್ಬ ಅಥವಾ ಇನ್ನೊಂದು ಸಮೂಹವನ್ನು ಹಣಿಯಲು, ಮಣಿಸಲು ಅಥವಾ ಅವಮಾನಿಸಲು ಬಳಸುವ ಮುಖ್ಯ ಅಸ್ತçವೆಂದರೆ ಅವರ ಆಸ್ತಿಯನ್ನು ಹಾಳುಗೆಡುವುವುದು. ಮತ್ತು ಅವರ ಮನೆಯ ಹೆಂಗಸರನ್ನು ಅವಮಾನಿಸುವುದು. ಇದು ಶತಮಾನಗಳಿಂದ ಬಂದ ಪದ್ಧತಿ. ಇದೀಗ ಹೊರವಿವರಗಳಲ್ಲಿ ಮಾತ್ರ ಬದಲಾಗಿದೆಯೇ ವಿನಃ ಆಂತರಿಕ ಸ್ಥಿತಿ ಮತ್ತು ಮನಸ್ಥಿತಿಗಳಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ.
ಇದೆಲ್ಲದರಿಂದ ಇಡೀ ಸಮಾಜದ ಉತ್ಪಾದನಾ ಪ್ರಕ್ರಿಯೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ಮಹಿಳೆಯರು, ಸಮಾನತೆ, ಸೌಹಾರ್ದ, ಮತ್ತು ಸಹಭಾಗಿತ್ವದ ಮೂಲಕ, ಪಡೆಯಬೇಕಾಗಿದ್ದ ಗೌರವದ ಸ್ಥಾನ ಮಾನಗಳಿಗೆ ಬದಲಾಗಿ ಮನೆ, ಮನೆತನ, ಗೌರವ, ಶೀಲ, ಮುಂತಾದ ಚೌಕಟ್ಟುಗಳಿಗೆ ಬಂಧಿಯಾಗಿ ಇರಬೇಕಾದ ಸ್ಥಿತಿ ಮುಂದುವರೆದಿದೆ. ಮತ್ತು ಇದನ್ನೇ ಅತ್ಯುನ್ನತ ಗೌರವ ಹಾಗೂ ನಮ್ಮ ಸಂಸ್ಕೃತಿಯ ಘನತೆಯೆಂದು ಹೇಳಲಾಗುತ್ತಿದೆ.

ಈ ಕಾರಣದಿಂದಲೇ ಗಂಡಿನ ಹಲವಾರು ತಪ್ಪುಗಳು, ದುಶ್ಚಟಗಳು ಕ್ಷಮ್ಯವೆನಿಸಿಕೊಳ್ಳುತ್ತವೆ. ಉದಾಹರಣೆಗೆ ಕುಡಿತ, ಸಿಗರೇಟು, ಮಾದಕದ್ರವ್ಯ ಸೇವನೆ, ಜೂಜು, ವ್ಯಭಿಚಾರ ಯಾವುದೇ ಇರಲಿ ಅದನ್ನೊಂದು ಸಾಮಾನ್ಯ ಸಂಗತಿಯAತೆ ನೋಡಲಾಗುತ್ತಿದೆ. ಈ ಬಗ್ಗೆ ಪುರುಷರಿಗೆ ಸಿಗುವ ರಿಯಾಯಿತಿಗಳು ಸ್ತಿçÃಯರಿಗೆ ಸಿಕ್ಕುವುದಿಲ್ಲ. ವ್ಯಭಿಚಾರವಿರಲಿ ಅತ್ಯಾಚಾರ ನಡೆದಾಗಲೂ ಅದಕ್ಕೆ ಹೆಣ್ಣೇ ಕಾರಣವೆನ್ನುವುದನ್ನು ನಾವು ಗಮನಿಸಬೇಕು.
ವ್ಯವಸ್ಥೆ ಜಡ್ಡುಗಟ್ಟುತ್ತ ಒಳಗೇ ಹರಳುಗಟ್ಟುತ್ತ ಹೋಗುತ್ತಿರುವುದಕ್ಕೆ ಬಹಳ ಒಳ್ಳೆಯ ಉದಾಹರಣೆಯೆಂದರೆ ಯಾರು ಇದನ್ನು ವಿರೋಧಿಸಬೇಕೋ ಅಂತಹ ಮಹಿಳಾ ಜಗತ್ತಿನ ಗಣನೀಯ ಭಾಗದಷ್ಟು ಜನರು ಈ ಪುರುಷ ಪ್ರಧಾನ ವ್ಯವಸ್ಥೆಯನ್ನು ಬೆಂಬಲಿಸುವುದು. ಇದು ಕೆಲವರಲ್ಲಿ ಬದುಕಿನ ಅನಿವಾರ್ಯತೆ ಇರಬಹುದು. ಆದರೆ ಬಹಳಷ್ಟು ಜನರು ಈ ಮನಸ್ಥಿತಿಗೆ ಒಗ್ಗಿಹೋಗಿದ್ದಾರೆ.

ಹಾಗೆಂದು ಮಹಿಳೆಯರಿಂದ ತಪ್ಪೇ ಆಗುವುದಿಲ್ಲವೇ? ಪುರುಷನ ದುಷ್ಕೃತ್ಯಗಳಲ್ಲಿ ಆಕೆಯೂ ಭಾಗಿಯಲ್ಲವೇ ಎಂದರೆ ಖಂಡಿತವಾಗಿಯೂ ಅಂಥವರು ಇದ್ದಾರೆ. ಆದರೆ ಅದಕ್ಕೆ ಹಲವಾರು ಕಾರಣಗಳಿರುತ್ತವೆ. ಆದರೆ ಇದು ಸಮಾಜದ ಒಟ್ಟೂ ಮನಸ್ಥಿತಿಯ ಭಾಗವಾಗಿರದೇ, ಕೆಲವು ಬಿಡಿ ಘಟನೆಗಳಾಗಿರುತ್ತವೆ ಮತ್ತು ಅವೂ ಕೂಡಾ ಹೆಚ್ಚಿನ ಸಲ ಪುರುಷ ಪಾರಮ್ಯದ ಭಾಗವಾಗಿಯೇ ನಡೆದಿರುತ್ತದೆ. ಅನೇಕ ವ್ಯಭಿಚಾರ ಮತ್ತು ಅತ್ಯಾಚಾರದ ಪ್ರಕರಣಗಳಲ್ಲಿ ಮೂರನೆಯ ಮಹಿಳೆಯೊಬ್ಬಳ ಪಾತ್ರವಿರುವುದು ಕಂಡುಬರುತ್ತದೆ. ಆದರೆ ಅದೂ ಕೂಡಾ ಮತ್ತು ಯಾವುದೋ ಆಸ್ತಿ, ಮನೆತನ, ಜಾತಿ, ಪ್ರತಿಷ್ಠೆ ಇತ್ಯಾದಿಗಳ ಹೆಸರಿನಲ್ಲಿ ನಡೆದಿರುತ್ತದೆ.
ಬಲಿಷ್ಠ ಗಂಡು ವರ್ಸಸ್ ನಾಜೂಕು ನಾರಿ:
ಇವೆಲ್ಲವೂ ಊಳಿಗಮಾನ್ಯ ಆರ್ಥಿಕ ವ್ಯವಸ್ಥೆಯ ಬಳುವಳಿಯಾಗಿದ್ದರೆ. ಇವೆಲ್ಲವನ್ನೂ ಮೀರಿದ ಮತ್ತು ಇನ್ನೂ ಒಂದು ಸ್ಥಿತಿಯ ಬಗ್ಗೆಯೂ ನಾವು ಗಮನಿಸಬೇಕು. ಅದೆಂದರೆ ಗಂಡಿನ ದೈಹಿಕ ಮತ್ತು ಮಾನಸಿಕ ಸ್ಥಿತಿ. ಇದು ಪ್ರಕೃತಿಯಿಂದ ಬಂದದ್ದು. ಆತನ ದೇಹ ರಚನೆ ಮತ್ತು ಆಮೂಲಕ ದೈಹಿಕ ಶಕ್ತಿ ಹೆಣ್ಣಿಗಿಂತ ಹೆಚ್ಚು. ಮತ್ತು ಲೈಂಗಿಕವಾಗಿ ಆತ ಆಕ್ರಮಣಕಾರಿ. ಈ ಪ್ರವೃತ್ತಿ ಹುಟ್ಟಿನಿಂದ ಬಂದಿದು,್ದ ಪ್ರಕೃತಿಯೇ ಆತನನನ್ನು ಹಾಗೆ ಮಾಡಿದೆ. ಯಾಕೆಂದರೆ ಮನುಷ್ಯನೂ ಮೂಲತಃ ಪ್ರಾಣಿಯೇ. ಸೃಷ್ಟಿಕ್ರಿಯೆ ಮುಂದುವರಿಯಬೇಕೆAದೇ ಗಂಡನ್ನು ಪ್ರಕೃತಿ ಹಾಗೆ ಸೃಷ್ಟಿಸಿದೆ. ಆದರೆ ನಿಧಾನವಾಗಿ ನಾವು ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡೆವು. ಅದಕ್ಕೆ ಕುಟುಂಬವೆAದು ಕರೆದೆವು. ಮನುಕುಲ ದೇಹಬಲದ ಜೊತೆಯಲ್ಲಿ ಬುದ್ಧಿಯನ್ನು ಉಪಯೋಗಿಸತೊಡಗಿದ ಮೇಲೆ ಶಾಂತಿಯುತ ಸೌಹಾರ್ದ ಜೀವನಕ್ಕಾಗಿ ಅದು ಅನಿವಾರ್ಯವೆಂದು ಕಂಡುಕೊAಡೆವು. ಹಾಗಾಗಿ ಮದುವೆ, ಸಹಬಾಳ್ವೆ ಮುಂತಾದ ಮೌಲ್ಯಗಳು ರೂಢಿಗೆ ಬಂದವು. ಆದರೆ ಗಂಡಿನ ಮೂಲ ಪ್ರವೃತ್ತಿ ಸಂಪೂರ್ಣವಾಗಿ ಬದಲಾಯಿತೇ ? ಎಂದರೆ ಖಂಡಿತವಾಗಿ ಹೌದು ಎನ್ನಲಾಗುವುದಿಲ್ಲ. ಇದು ವೈದ್ಯರು ಮತ್ತು ಮಾನಸಿಕ ತಜ್ಞರು ಸಮಾಜ ಶಾಸ್ತçಜ್ಞರು ವಿವೇಚಿಸಬೇಕಾದ ವಿಷಯ. ಆ ಕಾರಣಕ್ಕಾಗಿಯೇ ಸಾಮಾನ್ಯ ಸ್ಥಿತಿಯಲ್ಲಿ ಸಭ್ಯನಾಗಿರುವ ಪುರುಷ ಕೂಡಾ ಮಾದಕಗಳ ಮತ್ತಿನಲ್ಲಿ ಅಥವಾ ಬೇರೆಬೇರೆ ಸಂದರ್ಭಗಳಲ್ಲಿ ಕೂಡಾ ಕೆಲವು ಸಲ ಆಕ್ರಮಣಕಾರಿಯಾಗಿ ವರ್ತಿಸಬಲ್ಲ.
ಎರಡು ವರ್ಷದ ಹಿಂದೆ ಮೀ…ಟೂ (Me Too) ಎಂಬ ಒಂದು ಅಭಿಯಾನ ನಡೆಯಿತು. ನನ್ನಜ್ಜಿಯಲ್ಲೂ ಮೀ..ಟೂ ಕತೆಗಳಿದ್ದವು. ನನ್ನಮ್ಮ, ಅಕ್ಕ, ಹೆಂಡತಿ, ಮಗಳು ಎಲ್ಲರಲ್ಲೂ ಹೇಳಿಕೊಳ್ಳಲು ಈ ರೀತಿಯ ವಿಷಯಗಳಿವೆ. ನನ್ನ ಪರಿಚಯದ, ಒಡನಾಟದ ಹಿರಿಯ ಕಿರಿಯ ಮಹಿಳೆಯರೂ ತಮ್ಮ ಅನುಭವಗಳನ್ನು ನನ್ನ ಹೆಂಡತಿಯೊಡನೆ, ಅಕ್ಕ ತಂಗಿಯರಲ್ಲಿ ಹಂಚಿಕೊAಡಿದ್ದಾರೆ. ಹೆಣ್ಣು ಮಕ್ಕಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇವರಲ್ಲಿ ಅತಿ ಹೆಚ್ಚು ಜನರಿರುವುದು ಕೂಲಿ ಕಾರ್ಮಿಕ ಮತ್ತು ರೈತ ಮಹಿಳೆಯರು. ಇವರೆಲ್ಲರೂ ಬದುಕಿನಲ್ಲಿ ತಮ್ಮನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ಹೆಣ್ಣು ಮಕ್ಕಳನ್ನೂ ಪುರುಷ ಪ್ರಪಂಚದಿAದ ಕಾಪಾಡಿಕೊಳ್ಳಲು ಹೆಣಗುತ್ತ ಬದುಕುವವರು. ಇನ್ನು ಹೊರ ಪ್ರಪಂಚದ ಕಥೆಗಳು ನೂರಾರಿವೆ.
ಆದರೆ ಈ ಹೋರಾಟ ಚಳುವಳಿಯ ರೂಪ ಪಡೆಯುವ ಮೊದಲೇ ಸತ್ತುಹೋಯಿತು. ಕಾರಣವೇನೇ ಇರಲಿ. ಮೀ…ಟೂ ತಣ್ಣಗಾದಾಗ, ನಿಟ್ಟುಸಿರು ಬಿಟ್ಟವರ ಸಂಖ್ಯೆ ಎಷ್ಟಿರಬಹುದು.

ಪುರುಷರ ಈ ಪ್ರವೃತ್ತಿ ಕಡಿಮೆಯಾಗಬೇಕೆಂದರೆ ಬಾಲ್ಯದಿಂದಲೇ ಗಂಡು ಮಗುವಿಗೆ ವಿಶೇಷವಾದ ಶಿಕ್ಷಣ ಕೊಡಬೇಕಾಗುತ್ತದೆ. ಮತ್ತು ಹೆಣ್ಣುಮಕ್ಕಳಿಗೆ ತಮ್ಮ ದೇಹರಚನೆ, ಮುಟ್ಟು, ಗರ್ಭಗಳ ಮಾಹಿತಿ ಮತ್ತು ಜ್ಞಾನವನ್ನು ನೀಡುವಂತೆಯೇ ಗಂಡಿಗೆ ಆತನ ಅಕ್ರಮಣಾರಿ ಪ್ರವೃತ್ತಿಯ ನಿಯಂತ್ರಣ ಮತ್ತು ಹೆಣ್ಣಿನ ಬಗೆಗಿನ ಆತನ ದೃಷ್ಟಿಕೋನವನ್ನು ಆರೋಗ್ಯಪೂರ್ಣಗೊಳಿಸುವ ನಿಟ್ಟಿನಲ್ಲಿಯೂ ಕಾಲಕಾಲಕ್ಕೆ ಶಿಕ್ಷಣದ ನೀಡುವ ಅಗತ್ಯ ಇದೆ. ಇಂದಿನ ವ್ಯವಸ್ಥೆಯಲ್ಲಿ ಅದು ಸಾಧ್ಯವೆ?
ಪುರುಷಪ್ರಧಾನ ವ್ಯವಸ್ಥೆಯನ್ನು, ಜೊತೆಗೆ ಅದನ್ನು ಉಳಿಕೊಂಡಿರುವ ಸಾಮಾಜಿಕ ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗುವವರೆಗೆ ಮಹಿಳೆಯರು ಎರಡನೆಯ ದರ್ಜೆಯ ಪ್ರಜೆಗಳಾಗಿ, ಖಾಸಗಿ ಆಸ್ತಿಯಾಗಿ ಉಳಿದಿರುತ್ತಾರೆ. ಈ ಎಲ್ಲ ಅವಸ್ಥೆಗಳೂ ನಾನಾ ರೂಪದಲ್ಲಿ ಮುಂದುವರಿಯುತ್ತವೆ.
ಪರಿಸ್ಥಿತಿಯ ವ್ಯಂಗ್ಯವೆAದರೆ ಗಂಡು ಮಕ್ಕಳನ್ನು ತಿದ್ದುವ ಹೊಣೆಯೂ ತಾಯಿಯರ ಹೆಗಲೇರಿರುವುದು. ಮತ್ತು ಹೆಚ್ಚೂ ಕಡಿಮೆ ಅವರೂ ಇದನ್ನು ಒಪ್ಪಿಕೊಂಡಿರುವುದು.
– ಪ್ರಸಾದ್ ರಕ್ಷಿದಿ

Share this article :
Facebook
Twitter
LinkedIn

Leave a Reply

Your email address will not be published. Required fields are marked *

WRITTEN BY
FOLLOW ON
Tamara Hospital & IVF Centre
FOLLOW & SUBSCRIBE
Garden City University